ADVERTISEMENT

‘ಪ್ರಿಯಾಂಕಾರಿಂದ ಹುಮ್ಮಸ್ಸು ಇಮ್ಮಡಿ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST
ಪುಷ್ಪಾ ಅಮರನಾಥ್‌ ಹಾಗೂ ಸೌಮ್ಯ ರೆಡ್ಡಿ ಅವರು ಮಾರ್ಗರೇಟ್‌ ಆಳ್ವ ಅವರಿಗೆ ಶುಭ ಕೋರಿದರು. ರಾಮಲಿಂಗಾ ರೆಡ್ಡಿ ಇದ್ದರು.
ಪುಷ್ಪಾ ಅಮರನಾಥ್‌ ಹಾಗೂ ಸೌಮ್ಯ ರೆಡ್ಡಿ ಅವರು ಮಾರ್ಗರೇಟ್‌ ಆಳ್ವ ಅವರಿಗೆ ಶುಭ ಕೋರಿದರು. ರಾಮಲಿಂಗಾ ರೆಡ್ಡಿ ಇದ್ದರು.   

ಬೆಂಗಳೂರು: ‘ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಬಂದಿರುವುದು ನಮ್ಮ ಹುರುಪು, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದರು.

ಮುಂಬರುವ ಲೋಕಸಭಾ ಚುನಾವಣಾ ತಯಾರಿಗಾಗಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷೆಯರಿಗೆ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಪಕ್ಷ ಬಲಪಡಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಪ್ರಿಯಾಂಕಾ ಗಾಂಧಿ ನಮಗೆ ಪ್ರೇರಣೆಯಾಗಿದ್ದು, ಕಾಂಗ್ರೆಸ್‌ ಅವಧಿಯ ಸಾಧನೆಗಳನ್ನು ಮನೆ–ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ADVERTISEMENT

‘ಮಹಿಳೆಯರು ರಾಜಕೀಯಕ್ಕೆ ಬರುವುದು ಸಕಾರಾತ್ಮಕ ಬೆಳವಣಿಗೆ. ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ 33 ರಷ್ಟು ಮೀಸಲಾತಿ ನೀಡಬೇಕೆಂಬುದು ಪಕ್ಷದ ನಿಲುವಾಗಿದೆ’ ಎಂದು ತಿಳಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ಉಸ್ತುವಾರಿ ಜನಕ್‌ ಡಿಸೋಜಾ, ‘ಇಂದಿರಾಗಾಂಧಿ ಎಲ್ಲರಿಗೂ ಸ್ಫೂರ್ತಿಯಾಗಿದ್ದು. ಅವರನ್ನು ಮಾದರಿಯಾಗಿಟ್ಟುಕೊಂಡು ಪಕ್ಷ ಕಟ್ಟಬೇಕು. ಸೋನಿಯಾ ಗಾಂಧಿ ನಾಯಕತ್ವದಲ್ಲಿ 2004ರಿಂದ 2014ರ ವರೆಗೆ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಮಾರ್ಗರೇಟ್‌ ಆಳ್ವ, ಶಾಸಕ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ ಅವರು ಚುನಾವಣೆ ಎದುರಿಸುವ ಬಗೆ, ಮತದಾರರ ಮನವನ್ನು ಒಲಿಸುವ ವಿಧಾನ ಹಾಗೂ ಮತದಾನದ ಮಹತ್ವದ ಕುರಿತು ಸಲಹೆ–ಸೂಚನೆಗಳನ್ನು ಪದಾಧಿಕಾರಿಗಳಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.