ADVERTISEMENT

ಮಹಿಳೆ ಕೆಟಗರಿ ಅಲ್ಲ!: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 16:39 IST
Last Updated 29 ನವೆಂಬರ್ 2021, 16:39 IST
   

ಬೆಂಗಳೂರು: ‘ಮೀಸಲಾತಿ ವಿಷಯದಲ್ಲಿ ಮಹಿಳೆ ಮೀಸಲು ಕೆಟಗರಿ ಅಲ್ಲ, ಅದೊಂದು ಲಿಂಗಸೂಚಕ ಮಾತ್ರ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಶಿರಾ ನಗರಸಭೆಯ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನವೆಂಬರ್ 25ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.

ಈ ಸಂಬಂಧ ಅಬ್ದುಲ್ಲಾ ಖಾನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಬಿಸಿಎ (ಮಹಿಳೆ) ಅಥವಾ ಸಾಮಾನ್ಯ (ಮಹಿಳೆ) ಎನ್ನುವುದು ಪ್ರತ್ಯೇಕ ಮೀಸಲು ಕೆಟಗರಿ. ಆದ್ದರಿಂದ, ಶಿರಾ ನಗರಸಭೆಯ ವಾರ್ಡ್ 19ರಲ್ಲಿ ಬಿಸಿಎ (ಮಹಿಳೆ) ಎಂದು ಮೀಸಲಾತಿ ನಿಗದಿಪಡಿಸಿರುವುದರಲ್ಲಿ ಯಾವುದೇ ಪುನರಾವರ್ತನೆ ಅಗಿಲ್ಲ, ಮೀಸಲಾತಿ ಮಾರ್ಗಸೂಚಿ ಉಲ್ಲಂಘನೆಯೂ ಆಗಿಲ್ಲ. ಆದ್ದರಿಂದ, ಇದನ್ನು ವಿಚಾರಣೆಗೆ ಪರಿಗಣಿಸುವುದಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT