ADVERTISEMENT

ಕೋವಿಡ್‌: ಮೃತಪಟ್ಟ 130 ಶಿಕ್ಷಕರ ಅವಲಂಬಿತರಿಗೆ ನೌಕರಿ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:28 IST
Last Updated 27 ಮೇ 2021, 21:28 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್   

ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿ ಕೋವಿಡ್‌ನಿಂದ ಮೃತಪಟ್ಟ 130 ಶಿಕ್ಷಕ ಸಿಬ್ಬಂದಿಯ ಅವಲಂಬಿತರ ಪೈಕಿ ತಲಾ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ನೇಮಕಾತಿ ಪತ್ರ ನೀಡಿದೆ.

ಸರ್ಕಾರಿ ಕರ್ತವ್ಯದಲ್ಲಿರುವಾಗ ಮೃತಪಟ್ಟ ನೌಕರರ ಕುಟುಂಬದ ಅವಲಂಬಿತ ಸದಸ್ಯರಲ್ಲಿ ಒಬ್ಬರನ್ನು, ಅವರ ವಿದ್ಯಾರ್ಹತೆ ಪರಿಗಣಿಸಿ ‘ಸಿ’ ವೃಂದದ ಪ್ರಥಮ ದರ್ಜೆ ಸಹಾಯಕ ಹುದ್ದೆಗಿಂತ ಮೇಲ್ಮಟ್ಟದ್ದಲ್ಲದ ಯಾವುದಾದರೂ ಹುದ್ದೆಗೆ ನೇಮಕಾತಿಗೆ ಅವಕಾಶವಿದೆ. ಅದರನ್ವಯ, 53 ಮಂದಿಗೆ ಪ್ರಥಮ ದರ್ಜೆ ಸಹಾಯಕ, 31 ಮಂದಿಗೆ ದ್ವಿತೀಯ ದರ್ಜೆ ಸಹಾಯಕ, 46 ಮಂದಿಗೆ ಗ್ರೂಪ್‌ ‘ಡಿ‘ ಹುದ್ದೆ ನೀಡಲಾಗಿದೆ.

ನೇಮಕಗೊಂಡವರಿಗೆ ಆದೇಶ ಪತ್ರ ನೀಡಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ‘ಕೊರೊನಾ ಸೋಂಕಿನಿಂದ ಶಿಕ್ಷಣ ಪರಿವಾರದ ಅನೇಕರು ಮೃತಪಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿ ನೀಡಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.