ADVERTISEMENT

ಡಿ.ಎಸ್.ಶ್ರೀಧರ್‌ಗೆ ‘ಪಾರ್ತಿಸುಬ್ಬ ಪ್ರಶಸ್ತಿ’

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 21:00 IST
Last Updated 21 ಡಿಸೆಂಬರ್ 2020, 21:00 IST
ಡಿ.ಎಸ್.ಶ್ರೀಧರ್
ಡಿ.ಎಸ್.ಶ್ರೀಧರ್   

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2020ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಹಿರಿಯ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ದರೇಮನೆ ನಿಟ್ಟೂರು ಗ್ರಾಮದ ಡಿ.ಎಸ್. ಶ್ರೀಧರ್ ಅವರನ್ನು ಆಯ್ಕೆ ಮಾಡಲಾಗಿದೆ.

‘ಪ್ರಶಸ್ತಿಯು ₹1 ಲಕ್ಷ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿದೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದರು.

ಅಕಾಡೆಮಿಯ ‘ಗೌರವಪ್ರಶಸ್ತಿ’ಗೆ ಬಡಗುತಿಟ್ಟಿನ ಯಕ್ಷಗುರು ಉಡುಪಿಕುಂಜಿಬೆಟ್ಟು ಬನ್ನಂಜೆ ಸಂಜೀವ ಸುವರ್ಣ, ತೆಂಕುತಿಟ್ಟಿನ ಕಲಾವಿದ ಮಂಗಳೂರು ತಲಕಳದ ಕೆ.ತಿಮ್ಮಪ್ಪ ಗುಜರನ್, ಪಡುವಲಪಾಯದ ವಿದ್ವಾಂಸರಾದ ಶಿರಸಿಯ ಡಾ. ವಿಜಯ ನಳಿನಿ ರಮೇಶ್, ಮೂಡಲಪಾಯದ ವಿದ್ವಾಂಸ ಬೆಂಗಳೂರಿನ ಡಾ.ಚಕ್ಕೆರೆ ಶಿವಶಂಕರ್, ಮೂಡಲಪಾಯದ ಕಲಾವಿದ ಹರಪನಹಳ್ಳಿಯ ಬಿ.ಪರಶುರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಪುರಸ್ಕಾರ ಹೊಂದಿದೆ.

ADVERTISEMENT

‘ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ’ಗೆ ಕುಂದಾಪುರದ ತೆಂಕುತಿಟ್ಟು ಕಲಾವಿದ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬಡಗುತಿಟ್ಟು ಕಲಾವಿದ ಬೇಲ್ತೂರು ರಮೇಶ್ ಹಾಗೂಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ತೆಂಕುತಿಟ್ಟು ಕಲಾವಿದ ಉಡುಪಿಯ ಆವರ್ಸೆ ಶ್ರೀನಿವಾಸ ಮಡಿವಾಳ, ಮಂಗಳೂರಿನ ತೆಂಕುತಿಟ್ಟು ಕಲಾವಿದ ಹರಿನಾರಾಯಣ ಬೈಪಡಿತ್ತಾಯ ಹಾಗೂ ಪ್ರಸಂಗ ಕರ್ತೃ ಸಂಜಯ್ ಕುಮಾರ್ ಶೆಟ್ಟಿ, ಪಡುವಲಪಾಯದ ಸಂಘಟಕ ಶಿರಸಿಯ ಎಂ.ಆರ್. ಹೆಗಡೆ ಕಾನಗೋಡ, ಅರ್ಥಧಾರಿ ಬಂಟ್ವಾಳದ ವಿಟ್ಲ ಶಂಭು ಶರ್ಮ, ಮೂಡಲಪಾಯದ ಭಾಗವತ ಶಿರಾ ತಾಲ್ಲೂಕು ಬರಗೂರಿನ ಹನುಮಂತರಾಯಪ್ಪ ಮತ್ತು ಮುಖವೀಣೆ ಕಲಾವಿದ ಕೋಲಾರ ತಾಲ್ಲೂಕಿನ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹25 ಸಾವಿರ ನಗದು ಪುರಸ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.