ADVERTISEMENT

ವಾರದ ಎಲ್ಲ ದಿನ ಯಶವಂತಪುರ–ಶಿವಮೊಗ್ಗ ರೈಲು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
   

ಶಿವಮೊಗ್ಗ: ವಾರದಲ್ಲಿ ಆರು ದಿನ ಸಂಚರಿಸುತ್ತಿದ್ದ ಶಿವಮೊಗ್ಗ–ಯಶವಂತಪುರ ಜನಶತಾಬ್ದಿ ರೈಲಿನ ಸಂಚಾರವನ್ನು ಅ.14ರಿಂದ ಏಳೂದಿನಗಳಿಗೆ ವಿಸ್ತರಣೆಮಾಡಲಾಗಿದ್ದು, ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜನಶತಾಬ್ದಿ ರೈಲು ಶಿವಮೊಗ್ಗದಿಂದ ಬೆಳಿಗ್ಗೆ 5.30ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ 9.50ಕ್ಕೆ ತಲುಪುತ್ತದೆ. ಹಾಗೆಯೇ ಯಶವಂತಪುರದಿಂದಸಂಜೆ 5.30ಕ್ಕೆ ಹೊರಟು ರಾತ್ರಿ 9.50ಕ್ಕೆ ಶಿವಮೊಗ್ಗ ತಲುಪುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT