ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶನಿವಾರ, 9–9–1995

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:01 IST
Last Updated 8 ಸೆಪ್ಟೆಂಬರ್ 2020, 15:01 IST
   

ರಾಜ್ಯದ ಐಎಎಸ್‌ ಅಧಿಕಾರಿ ವಾಸುದೇವನ್‌ಗೆ ಶಿಕ್ಷೆ ಕಾಯಂ

ನವದೆಹಲಿ, ಸೆ. 8– ನ್ಯಾಯಾಲಯ ನಿಂದನೆಗಾಗಿ ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಜೆ. ವಾಸುದೇವನ್‌ ಅವರಿಗೆ ನೀಡಿರುವ ಒಂದು ತಿಂಗಳ ಜೈಲು ಶಿಕ್ಷೆಯನ್ನು ಇಂದು ಸುಪ್ರೀಂ ಕೋರ್ಟ್‌ ಕಾಯಂಗೊಳಿಸಿತು.

ಜೈಲು ಶಿಕ್ಷೆ ರದ್ದು ಮಾಡಬೇಕೆಂದು, ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಸುದೇವನ್‌ ಅವರು ಬೇಷರತ್‌ ಕ್ಷಮೆ ಯಾಚಿಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು.

ADVERTISEMENT

ಬೆಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರ್‌ ಟಿ.ಆರ್‌.ಧನಂಜಯ ಅವರಿಗೆ ಸೂಪರ್‌ ಸ್ಕೇಲ್‌ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಿ ಅವರಿಗಾಗಿರುವ ಸೇವಾ ಅನ್ಯಾಯವನ್ನು ಸರಿಪಡಿಸಬೇಕೆಂದು ನ್ಯಾಯಾಲಯ ನೀಡಿದ ಆಜ್ಞೆಯನ್ನು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿರುವ ವಾಸುದೇವನ್‌ ಅವರು ಉದ್ದೇಶಪೂರ್ವಕವಾಗಿಯೇ ಜಾರಿಗೆ ತಂದಿಲ್ಲ ಎಂದು ಕೋರ್ಟ್‌ ಹೇಳಿದೆ.

ಅನಧಿಕೃತ ಕಟ್ಟಡ 15 ದಿನದಲ್ಲಿ ವರದಿ

ಬೆಂಗಳೂರು, ಸೆ. 8– ವಿಧಾನಮಂಡಲದ ಇಪ್ಪತ್ತು ಮಂದಿ ಸದಸ್ಯರ ಜಂಟಿ ಪರಿಶೀಲನಾ ಸಮಿತಿಯು ರಾಜ್ಯದ ನಗರ ಪ್ರದೇಶಗಳಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ
ಗಳನ್ನು ಸಕ್ರಮಗೊಳಿಸುವ ತಿದ್ದುಪಡಿ ವಿಧೇಯಕದ ಸಂಬಂಧದಲ್ಲಿ ಈ ತಿಂಗಳ 15ರ ಒಳಗಾಗಿ ವರದಿಯನ್ನು ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.