ADVERTISEMENT

ಅಂತರ್ಜಲದ ಮೇಲೆ ನಿಗಾ: ನಾಸಾದ ಜೋಡಿ ವ್ಯೋಹನೌಕೆ ಗಗನಕ್ಕೆ

ಪಿಟಿಐ
Published 23 ಮೇ 2018, 19:30 IST
Last Updated 23 ಮೇ 2018, 19:30 IST

ವಾಷಿಂಗ್ಟನ್‌: ಸಮುದ್ರದಲ್ಲಿ ನೀರಿನ ಮಟ್ಟದಲ್ಲಿನ ಏರಿಕೆ, ಮಂಜುಗಡ್ಡೆ ಕರಗುವುದು ಹಾಗೂ ಭೂಮಿಯಲ್ಲಿನ ಬರ ಪರಿಸ್ಥಿತಿ ಮೇಲೆ ನಿಗಾ ಇಡಲು ಜೋಡಿ ವ್ಯೋಮನೌಕೆಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಸಂವಹನಕ್ಕೆ ನೆರವಾಗುವ ಐದು ಉಪಗ್ರಹಗಳನ್ನು ಸಹ ಇದೇ ರಾಕೆಟ್‌ ಮೂಲಕ ಉಡ್ಡಯನ ಮಾಡಲಾಗಿದೆ. ವ್ಯೋಮನೌಕೆ ಗ್ರೇಸ್‌–ಎಫ್‌ಓ ಮತ್ತು ಐದು ಉಪಗ್ರಹಗಳನ್ನು ಹೊತ್ತ ಸ್ಪೇಸ್‌ ಎಕ್ಸ್‌–ಫಾಲ್ಕನ್‌ 9 ಎಂಬ ರಾಕೆಟ್‌ ಕ್ಯಾಲಿಫೋರ್ನಿಯಾದಲ್ಲಿರುವ ವ್ಯಾಂಡೇನ್‌ಬರ್ಗ್ ವಾಯುಸೇನಾ ನೆಲೆಯಿಂದ ಬುಧವಾರ ನಭದತ್ತ ಹಾರಿತು.

ಗ್ರೇಸ್‌–ಎಫ್‌ಓ ಎಂಬ ವ್ಯೋಮನೌಕೆ ಉಡ್ಡಯನ ಯೋಜನೆಯನ್ನು ನಾಸಾ ಮತ್ತು ಜರ್ಮನಿಯ ಭೂವಿಜ್ಞಾನ ಸಂಶೋಧನಾ ಕೇಂದ್ರ (ಜಿಎಫ್‌ಝಡ್‌) ಜಂಟಿಯಾಗಿ ಅನುಷ್ಠಾನಗೊಳಿಸಿವೆ.

ADVERTISEMENT

‘ಸಂಭಾವ್ಯ ಬರ ಪರಿಸ್ಥಿತಿ, ನೀರಿನ ನಿರ್ವಹಣೆ, ಅಂತರ್ಜಲ ಮಟ್ಟದಲ್ಲಿನ ಏರಿಳಿತದ ಬಗ್ಗೆ ಗ್ರೇಸ್‌–ಎಫ್‌ಓ ಮಾಹಿತಿ ಒದಗಿಸುವುದು. ಜನರ ಜೀವನಮಟ್ಟವನ್ನು ಸುಧಾರಿಸಲು ನೆರವಾಗುವ ಈ ಮಾಹಿತಿಯನ್ನು ಎಲ್ಲ ದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ’ ಎಂದು ನಾಸಾದ ಸೈನ್ಸ್‌ ಮಿಷನ್‌ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್‌ ಝರ್ಬಚೆನ್‌ ತಿಳಿಸಿದ್ದಾರೆ.

‘ಈ ವ್ಯೋಹನೌಕೆ ಮೊದಲ ಮಾಹಿತಿಯನ್ನು ಕಳಿಸಲು ಏಳು ತಿಂಗಳು ಬೇಕಾಗಬಹುದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.