ADVERTISEMENT

ಅಣುಸ್ಥಾವರ ಅಭಿವೃದ್ಧಿ ನಿಲ್ಲಿಸುವುದಿಲ್ಲ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ಮಾಸ್ಕೋ (ಇತಾರ್‌ತಾಸ್): ಜಪಾನಿನ ರಿಯಾಕ್ಟರುಗಳಲ್ಲಿ ಸತತ ಸ್ಫೋಟಗಳು ಸಂಭವಿಸುತ್ತಿದ್ದರೂ ಅಣು ಸ್ಥಾವರಗಳ ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವುದಾಗಿ ರಷ್ಯದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಗುರುವಾರ ಪ್ರಕಟಿಸಿದರು.

ಅಣು ಶಕ್ತಿಯಿಲ್ಲದೆ ಜಾಗತಿಕ ಶಕ್ತಿಯ ಸಮತೋಲದ ಕುರಿತು ಮಾತನಾಡುವುದೇ ಅಸಾಧ್ಯ. ಜಪಾನ್‌ನಲ್ಲಿ ಅವಘಡಗಳು ಸಂಭವಿಸುತ್ತಿರುವ ಸ್ಥಾವರಗಳಲ್ಲಿನ ಉಪಕರಣಗಳು ನಲವತ್ತು ವರ್ಷಗಳಷ್ಟು ಹಳೆಯದಾಗಿವೆ. ಆದರೆ ಆಧುನಿಕ ಅಣುಶಕ್ತಿ ಸ್ಥಾವರಗಳ ರಕ್ಷಣೆಯ ವ್ಯವಸ್ಥೆ ವಿಶೇಷ ಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಯಾವುದೇ ಸ್ಥಾವರಗಳಿಗೆ ಹಾನಿಯಾಗದಂತೆ ತಡೆಯಲು ಸಾಧ್ಯವಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.