ADVERTISEMENT

ಅಣು ಸ್ಥಾವರಗಳಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ವಾಷಿಂಗ್ಟನ್, (ಪಿಟಿಐ): ಪರಮಾಣು ನಿಯಂತ್ರಣ ಆಯೋಗದ ಅಧ್ಯಕ್ಷರ ವಿರೋಧದ ಹೊರತಾಗಿಯೂ ಎರಡು ಪರಮಾಣು ಸ್ಥಾವರಗಳನ್ನು ಸ್ಥಾಪಿಸಲು ಅಮೆರಿಕದಲ್ಲಿ ಅನುಮತಿ ದೊರೆತಿದೆ.

ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಈ ಸ್ಥಾವರಗಳು ಸ್ಥಾಪನೆಯಾಗಲಿವೆ.ಜಾರ್ಜಿಯಾದಲ್ಲಿ  ಎರಡು 1,100 ಮೆಗಾವಾಟ್ ಸಾಮರ್ಥ್ಯದ ವೆಸ್ಟಿಂಗ್‌ಹೌಸ್ ತೋಶಿಬಾ ಎಪಿ1000 ಸ್ಥಾವರ ನಿರ್ಮಾಣಕ್ಕೆ ಪರಮಾಣು ನಿಯಂತ್ರಣ ಆಯೋಗದ (ಎನ್‌ಆರ್‌ಸಿ) ಸದಸ್ಯರು ಒಪ್ಪಿಗೆ ನೀಡಿದ್ದಾರೆ.ಇದೇ ಸ್ಥಳದಲ್ಲಿ ಈಗಾಗಲೇ ಎರಡು ರಿಯಾಕ್ಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

1996ರಲ್ಲಿ ಪರಮಾಣು ಸ್ಥಾವರಗಳು ಸ್ಥಾಪನೆಗೊಂಡಿದ್ದರೂ 1978ರ ಬಳಿಕ ಇದೇ ಮೊದಲ ಬಾರಿಗೆ ಹೊಸ ಸ್ಥಾವರಗಳ ಸ್ಥಾಪನೆಗೆ ಎನ್‌ಆರ್‌ಸಿ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.