ADVERTISEMENT

ಅನ್ಯ ರಾಷ್ಟ್ರಗಳ ಹಕ್ಕು ಗೌರವಿಸಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಟೆಹರಾನ್ (ಎಎಫ್‌ಪಿ): ಪಾಶ್ಚಿಮಾತ್ಯ ರಾಷ್ಟ್ರಗಳು ತನ್ನ ವಿರುದ್ಧ ಬೆದರಿಕೆಯ ದನಿಯಲ್ಲಿ ಮಾತನಾಡುವುದನ್ನು ಕೈಬಿಡಬೇಕು ಎಂದು ಇರಾನ್ ಭಾನುವಾರ ಎಚ್ಚರಿಸಿದೆ.

ತನ್ನ ವಿರುದ್ಧ ಪರಮಾಣು ಚಟುವಟಿಕೆಗಳ ಆರೋಪ ಹೊರಿಸಿ ಪಶ್ಚಿಮದ ರಾಷ್ಟ್ರಗಳು ವಿಧಿಸಿರುವ ದಿಗ್ಬಂಧನದಿಂದಾಗಿ `ಮಾನಸಿಕ ಪರಿಣಾಮ~ ಆಗಿರುವುದನ್ನು ಹೊರತುಪಡಿಸಿ ಮತ್ತಿನ್ನೇನೂ ಆಗಿಲ್ಲ ಎಂದು ರಾಷ್ಟ್ರಾಧ್ಯಕ್ಷ ಮಹಮೂದ್ ಅಹಮದಿನೇಜಾದ್ ಗೇಲಿ ಮಾಡಿದ್ದಾರೆ.

ಅಮೆರಿಕ, ಯೂರೋಪ್ ಮಿತ್ರರಾಷ್ಟ್ರಗಳು ಶಸ್ತ್ರಾಸ್ತ್ರ, ಬಾಂಬ್ ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿ ಬೆದರಿಸುವ ಬದಲು ಅನ್ಯ ರಾಷ್ಟ್ರಗಳ ಹಕ್ಕುಗಳನ್ನು ಗೌರವಿಸಿ ಅವುಗಳಿಗೆ ಸಹಕಾರ ನೀಡುವುದನ್ನು ಕಲಿಯಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.