
ಪ್ರಜಾವಾಣಿ ವಾರ್ತೆಕಠ್ಮಂಡು (ಪಿಟಿಐ): ಪಶ್ಚಿಮ ನೇಪಾಳದ ಕಣಿವೆಯೊಂದಕ್ಕೆ ಜೀಪು ಜಾರಿ ಬಿದ್ದ ಪರಿಣಾಮ ಏಳು ಜನ ಹಿಂದೂ ಯಾತ್ರಿಗಳು ಮೃತಪಟ್ಟಿದ್ದು, ಏಳು ಜನ ಗಾಯಗೊಂಡಿದ್ದಾರೆ.
 
 ‘ಯಾತ್ರಿಗಳು ಸಿರ್ಶೆಕೋಟ್‌ನ ಅಕಾಲದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದು, ಕಣಿವೆಯ ಕಿರಿದಾದ ದಾರಿಯಲ್ಲಿ ಹೋಗುತ್ತಿರುವಾಗ ವಾಹನ ಜಾರಿ 200 ಮೀ. ಆಳದ ಪ್ರಪಾತಕ್ಕೆ ಉರುಳಿದೆ’ ಎಂದು ಇಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.