ADVERTISEMENT

ಅಪಘಾತ: ಚಾನ್ಸೆಲರ್ ಏಂಜೆಲಾ ಪಾರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬರ್ಲಿನ್ (ಪಿಟಿಐ): ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.ಏಂಜೆಲಾ ಅವರು ಫೆಡೆರಲ್ ಪೊಲೀಸ್‌ನ ವಿಐಪಿ ಹೆಲಿಕಾಪ್ಟರ್‌ನಲ್ಲಿ ತನ್ನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಓಲ್ಡನ್‌ಬರ್ಗ್‌ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.

ಏಂಜೆಲಾ ಅವರನ್ನು ಓಲ್ಡನ್‌ಬರ್ಗ್‌ನಲ್ಲಿ ಇಳಿಸಿದ ಬಳಿಕ ಹೆಲಿಕಾಪ್ಟರ್, ಮೂರು ಮಂದಿ ಸಿಬ್ಬಂದಿಗಳೊಂದಿಗೆ ಮ್ಯೂನಿಚ್‌ಗೆ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಯಿತು ಎನ್ನಲಾಗಿದೆ. ಚುನಾವಣಾ ರ್ಯಾಲಿ ಮುಗಿದ ಬಳಿಕ ಏಂಜೆಲಾ ಅವರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಲಾಯಿತಲ್ಲದೆ ಬಳಿಕ ಅವರು  ಕಾರಿನಲ್ಲಿ ಮುಂದಿನ ಪ್ರಯಾಣ ಕೈಗೊಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.