ADVERTISEMENT

ಅಬುಧಾಬಿ ವಿಮಾನ ನಿಲ್ದಾಣ: ನೇಪಾಳ ಸಚಿವ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಕಠ್ಮಂಡು (ಪಿಟಿಐ): ಸಮರ್ಪಕ ವೀಸಾ ಹೊಂದಿಲ್ಲದ ಆರೋಪದ ಮೇಲೆ ನೇಪಾಳದ ಸಚಿವರೊಬ್ಬರು ಅಬುಧಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ಬಂಧನಕ್ಕೆ ಒಳಗಾಗಿ ಮುಜಗರಕ್ಕೀಡಾದ ಘಟನೆ ನಡೆದಿದೆ. ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಖಾತೆ ಸಚಿವ ಲೋಕೇಂದ್ರ ಬಿಸ್ತಾಮಗರ್ ಅವರು ಜರ್ಮನಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಆದರೆ, ಅವರ ಪಾಸ್‌ಪೋರ್ಟ್ ಮೇಲೆ ವೀಸಾ ಸ್ಯ್ಟಾಂಪ್ ಇರದಿದ್ದ ಕಾರಣ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ನಾಲ್ಕು ತಾಸುಗಳ ಕಾಲ ವಿಚಾರಣೆಗೆ ಗುರಿಪಡಿಸಿದರು ಎಂದು ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.