ADVERTISEMENT

ಅಬೆ, ಕಿಮ್‌ ಜಾಂಗ್‌ ಉನ್‌ ಭೇಟಿ?

ಏಜೆನ್ಸೀಸ್
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಟೊಕಿಯೊ: ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಲು ಜಪಾನ್‌ ಒಲವು ತೋರಿದ್ದು, ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರೊಂದಿಗೆ ಸಭೆ ನಡೆಸಲು ಪ್ರಧಾನಿ ಶಿಂಜೊ ಅಬೆ ಬಯಸಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಸಭೆ ನಡೆಯುವ ಬಗ್ಗೆ ಉಭಯ ರಾಷ್ಟ್ರಗಳು ಯಾವುದೇ ರೀತಿಯ ಅಧಿಕೃತ ಘೋಷಣೆ ಮಾಡಿಲ್ಲ.

‘ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸಲು ಜಪಾನ್‌, ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಒಟ್ಟಾಗಿ ಕೆಲಸ ಮಾಡಲಿವೆ. ಅಣ್ವಸ್ತ್ರ, ಕ್ಷಿಪಣಿ, ಪ್ರಜೆಗಳ ಅಪಹರಣ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸಮರ್ಪಕ ನೀತಿ ರೂಪಿಸಲು ಜಪಾನ್‌ ಬಯಸುತ್ತದೆ’ ಎಂದು ಜಪಾನ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.