ADVERTISEMENT

ಅಬೋಟಾಬಾದ್‌ನಲ್ಲಿ ಲಾಡೆನ್ ಹತ್ಯೆ: ಮುಷರಫ್ ಆಶ್ಚರ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2011, 8:45 IST
Last Updated 2 ಮೇ 2011, 8:45 IST

 ಲಂಡನ್ (ಐಎಎನ್ಎಸ್): ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಇಸ್ಲಾಮಾಬಾದ್ ಬಳಿಯ ಅಬೋಟಾಬಾದ್‌ನಲ್ಲಿದ್ದನು ಎಂಬುದರ ಬಗ್ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸೋಮವಾರ ಇಲ್ಲಿ ಆಶ್ವರ್ಯವನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ವಾಯುದಾಳಿಯ ಕಾರ್ಯಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆಯಾಗಿರುವುದರ ಬಗ್ಗೆ ಅಮೆರಿಕಾದ ಅಧ್ಯಕ್ಷ ಬರಾಕ್  ಒಬಾಮಾ ವಾಷಿಂಗ್ಟನ್ ನಲ್ಲಿ ಘೋಷಣೆ ಮಾಡಿದ ನಂತರ ಮುಷರಫ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಅವರು, ~ಒಸಾಮಾ ಬಿನ್ ಲಾಡೆನ್ ಹತ್ಯೆ ಆಶ್ವರ್ಯ ಉಂಟು ಮಾಡಿದೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಅಮೆರಿಕಾದ ವಾಯು ದಾಳಿ ಕಾರ್ಯಚರಣೆಯು ನಮ್ಮ ಸಾರ್ವಭೌಮತ್ವವನ್ನು ಉಲ್ಲಂಘನೆ ಮಾಡಿದೆ.

ನಾವು ಕೂಡ ಆ ಭಯೋತ್ಪಾಕನ ವಿರುದ್ಧ ಹೋರಾಟವನ್ನು ನಡೆಸಿದ್ದೆವು. ಆದರೆ ಕಾರ್ಯಚರಣೆಯಿಂದ ಸೋಲನ್ನು ಅನುಭವಿಸಿದೆವು. ಇದಕ್ಕೆ ಅಮೆರಿಕಾ ಹಾಗೂ ಪಾಕಿಸ್ತಾನದ ಗುಪ್ತಚರ ಇಲಾಖೆಗಳು ಕಾರಣ ಎಂದರು.

ADVERTISEMENT

ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ದಾಳಿ (9/11) ನಡೆಸಿದ್ದ  ಸಮಯದಲ್ಲಿ ಪರ್ವೇಜ್ ಮುಷರಫ್ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.