ADVERTISEMENT

ಅಬೋಟಾಬಾದ್‌ನಲ್ಲಿ ಸಿಕ್ಕಿದ ಮಾಹಿತಿ:ಒಬಾಮ ಹತ್ಯೆಗೆ ಅಲ್‌ಖೈದಾ?

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ವಾಷಿಂಗ್ಟನ್(ಪಿಟಿಐ):  ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ತನ್ನ  ಕೊನೆಯ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹತ್ಯೆಗೈಯುವ ಮತ್ತು ಅಮೆರಿಕಾದ ಮೇಲೆ ಪರಿಣಾಮಕಾರಿ ದಾಳಿ ನಡೆಸುವ ಯೋಜನೆ ರೂಪಿಸಿದ್ದ ಎಂದು ಮಾಧ್ಯಮವೊಂದು ಶನಿವಾರ ಬಯಲುಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಅಬೋಟಾಬಾದ್‌ನಲ್ಲಿ ಲಾಡೆನ್ ಮನೆಯಿಂದ ವಶಪಡಿಸಿಕೊಂಡಿದ್ದ ಹಾಡ್‌ಡಿಸ್ಕ್‌ಗಳಿಂದ ಲಭ್ಯವಾಗಿವೆ ಎಂಬುದನ್ನೂ ಅದು ತಿಳಿಸಿದೆ.

ಒಬಾಮ ಹತ್ಯೆಯ ನಂತರ ಉಪಾಧ್ಯಕ್ಷ ಜಾಯ್ ಬಿಡೆನ್ ಅಧಿಕಾರ ವಹಿಸಿಕೊಳ್ಳಲಿದ್ದು, ಆಗ ಉದ್ಭವಿಸುವ ಗೊಂದಲಮಯ ಪರಿಸ್ಥಿತಿಯನ್ನು ನಿಭಾಯಿಸಲು ಬಿಡೆನ್ ವಿಫಲರಾಗುತ್ತಾರೆ. ಆ ಪರಿಸ್ಥಿತಿಯ ಲಾಭವನ್ನು ನಾವು ಪಡೆಯಬೇಕು ಎಂದು ಲಾಡೆನ್ ತನ್ನ ಸಹಚರರಿಗೆ ಬರೆದಿದ್ದ ಪತ್ರವೂ ಈಗ ಅಮೆರಿಕ ಸೇನೆಯ ವಶದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.