ADVERTISEMENT

ಅಮೆರಿಕ ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಟ್ರಂಪ್‌ ಅಸಮಾಧಾನ

ಪಿಟಿಐ
Published 14 ಜೂನ್ 2018, 14:56 IST
Last Updated 14 ಜೂನ್ 2018, 14:56 IST
ಅಮೆರಿಕ ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಟ್ರಂಪ್‌ ಅಸಮಾಧಾನ
ಅಮೆರಿಕ ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಟ್ರಂಪ್‌ ಅಸಮಾಧಾನ   

ವಾಷಿಂಗ್ಟನ್‌: ಅಣ್ವಸ್ತ್ರ ನಿಶ್ಶಸ್ತ್ರೀಕರಣದ ವಿಷಯವನ್ನು ಪ್ರಮುಖವಾಗಿಸಿಕೊಂಡು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಜತೆಗೆ ನಡೆಸಿದ ಐತಿಹಾಸಿಕ ಶೃಂಗಸಭೆಯನ್ನು ಅಮೆರಿಕ ಮಾಧ್ಯಮಗಳು ಮುಕ್ತ ಮನಸ್ಸಿನಿಂದ ವರದಿ ಮಾಡಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳೇ ದೇಶದ ಜನರ ಶತ್ರು. ಮೂರ್ಖರಿಂದ ಸುಳ್ಳು ಸುದ್ದಿಗಳನ್ನು ಸುಲಭವಾಗಿ ಹರಿಬಿಡಲಾಗುತ್ತಿದೆ. ವಿಶೇಷವಾಗಿ ಎನ್‌ಬಿಸಿ ಮತ್ತು ಸಿಎನ್‌ಎನ್‌ ಉತ್ತರ ಕೊರಿಯಾ ಜತೆಗಿನ ಮಹತ್ವದ ಒಪ್ಪಂದವನ್ನು ಕಡೆಗಣಿಸುವ ಪ್ರಯತ್ನ ಮಾಡಿವೆ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಕಿಮ್‌ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದ ಬಳಿಕ ಇನ್ನು ಮುಂದೆ ಉತ್ತರ ಕೊರಿಯಾದಿಂದ ಅಣ್ವಸ್ತ್ರಗ ಬೆದರಿಕೆ ಇರುವುದಿಲ್ಲ ಎನ್ನುವ ಅಭಿಪ್ರಾಯ ಮೂಡಿತು ಎಂದು ತಿಳಿಸಿದ್ದಾರೆ.

ADVERTISEMENT

ಟ್ರಂಪ್‌ ಆಡಳಿತದಲ್ಲಿ ತಜ್ಞ ವಿಜ್ಞಾನಿಗಳು ಇಲ್ಲ ಎಂದು ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ವರದಿ ಪ್ರಕಟವಾದ ನಂತರ ಟ್ರಂಪ್‌ ಈ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.