ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಸುಮಾರು 11.54 ಲಕ್ಷ ಮತದಾರರಿದ್ದು, ಆಡಳಿತಾರೂಢ ಡೆಮಾಕ್ರಾಟ್ಸ್ ಮತ್ತು ವಿರೋಧ ಪಕ್ಷವಾದ ರಿಪಬ್ಲಿಕನ್ ಪಕ್ಷದವರು ಭಾರತೀಯರನ್ನು ಕಡೆಗಣಿಸುವಂತಿಲ್ಲ.
2010ರ ಜನಗಣತಿ ಪ್ರಕಾರ ಅಮೆರಿಕದಲ್ಲಿರುವ ಭಾರತೀಯ ಮತದಾರರ ಸಂಖ್ಯೆ ದಶಕದಲ್ಲಿ ದ್ವಿಗುಣಗೊಂಡಿದೆ. 2000ನೇ ಇಸವಿಯಲ್ಲಿ ಭಾರತೀಯ ಮತದಾರರ ಸಂಖ್ಯೆ 5.76 ಲಕ್ಷ ಇತ್ತು ಎಂದು ಅಮೆರಿಕದ ಎರಡು ಸರ್ಕಾರೇತರ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.