ADVERTISEMENT

ಅರಬ್ ಒಕ್ಕೂಟದ ನಿರ್ಣಯ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಡಮಾಸ್ಕಸ್ (ಎಎಫ್‌ಪಿ): ಅಧ್ಯಕ್ಷ ಬಶರ್ ಅಲ್ ಅಸದ್ ಅವರು ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಬೇಕು ಎಂಬ ಅರಬ್ ರಾಷ್ಟ್ರಗಳ ಒಕ್ಕೂಟದ ನಿರ್ಣಯವನ್ನು ತಿರಸ್ಕರಿಸಿರುವ ಸಿರಿಯಾ, ತಮ್ಮ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.

ಅರಬ್ ರಾಷ್ಟ್ರಗಳ ಒಕ್ಕೂಟದ ತೀರ್ಮಾನವು ಸಿರಿಯಾದ ಸಾರ್ವಭೌಮತ್ವದ ಮೇಲೆ ದಾಳಿ ಎಂದು ಬಣ್ಣಿಸಿರುವ ಸಿರಿಯಾ ಆಡಳಿತವು, ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಹಸ್ತಕ್ಷೇಪ ಸಲ್ಲ ಎಂದು ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.