ADVERTISEMENT

ಅಲ್ಜೀರಿಯಾ ಸೇನಾ ವಿಮಾನ ಪತನ: ನೂರಕ್ಕೂ ಹೆಚ್ಚು ಸಾವು

ಏಜೆನ್ಸೀಸ್
Published 11 ಏಪ್ರಿಲ್ 2018, 10:16 IST
Last Updated 11 ಏಪ್ರಿಲ್ 2018, 10:16 IST
ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯವನ್ನು ‘ದಿ ಸ್ಕಾಟಿಷ್ ಸನ್’ ಸುದ್ದಿವಾಹಿನಿ ಪ್ರಸಾರ ಮಾಡಿದೆ.
ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯವನ್ನು ‘ದಿ ಸ್ಕಾಟಿಷ್ ಸನ್’ ಸುದ್ದಿವಾಹಿನಿ ಪ್ರಸಾರ ಮಾಡಿದೆ.   

ಅಲ್ಜೀರ್ಸ್‌: ಸುಮಾರು 200 ಸೈನಿಕರನ್ನು ಒಳಗೊಂಡಿದ್ದ ಅಲ್ಜೀರಿಯಾದ ಸೇನಾ ವಿಮಾನ ಬುಧವಾರ ಪತನಗೊಂಡಿದ್ದು, ಕನಿಷ್ಠ 105 ಮಂದಿ ಮೃತಪಟ್ಟಿದ್ದಾರೆ.

ಅಲ್ಜೀರಿಯಾದ ರಾಜಧಾನಿ ಆಲ್ಜೀರ್ಸ್‌ ಸಮೀಪದ ಬೌಫರಿಕ್‌ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ಪತನಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆಯ ಬಗ್ಗೆ ಈಗಲೇ ನಿಖರ ಮಾಹಿತಿ ನೀಡಲಾಗದು’ ಎಂದು ಅಲ್ಜೀರಿಯಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮೊಹಮ್ಮದ್ ಅಚೌರ್ ತಿಖಿಸಿದ್ದಾರೆ.

ADVERTISEMENT

ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವ ದೃಶ್ಯವನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.