
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳು ನಡೆಸಿದ ಡ್ರೋಣ್ ದಾಳಿಯಲ್ಲಿ ಅಲ್‌ಖೈದಾ ಸಂಘಟನೆಯ ಎರಡನೇ ಪ್ರಮುಖ ನಾಯಕ ಅಬು ಯಾಹ್ಯಾ ಅಲ್-ಲಿಬಿ ಮೃತಪಟ್ಟಿರುವುದಾಗಿ ಅಮೆರಿಕ ಬುಧವಾರ ದೃಢಪಡಿಸಿವೆ.
ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜಾಯ್ ಕಾರ್ನೆ ಅವರು ಸುದ್ದಿ ಗೋಷ್ಠಿಯಲ್ಲಿ ಲಿಬಿ ಸತ್ತಿರುವುದನ್ನು ಖಚಿತಪಡಿಸಿದ್ದಾರೆ.ಆದರೆ ಲಿಬಿ ಹೇಗೆ ಹಾಗೂ ಎಲ್ಲಿ ಸತ್ತಿದ್ದಾನೆ ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಅಲ್‌ಖೈದಾದಲ್ಲಿ ಸಂಚು ರೂಪಿಸುವ ಹೊಣೆ ಹೊತ್ತಿದ್ದ 49 ವರ್ಷದ ಲಿಬಿ ತಲೆಯ ಮೇಲೆ ಅಮೆರಿಕ ಸರ್ಕಾರ 10 ಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. ಲಿಬಿ, ಅಲ್‌ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ನಂತರ ಪ್ರಭಾವಿ ನಾಯಕನಾಗಿದ್ದ. ಆತನಿಗೆ ಸಂಘಟನೆಯಲ್ಲಿ ಪ್ರಧಾನ ವ್ಯವಸ್ಥಾಪಕನ ಜವಾಬ್ದಾರಿ ನೀಡಲಾಗಿತ್ತು ಎಂದೂ ಕಾರ್ನೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.