ಕೈರೋ (ಪಿಟಿಐ): ಈಜಿಪ್ಟ್‌ನ ಹಂಗಾಮಿ ಅಧ್ಯಕ್ಷರಾಗಿ ಆಡ್ಲಿ ಮನ್ಸೋರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ಸೇನೆಯು ಮೊಹಮ್ಮದ್ ಮೋರ್ಸಿ ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಆಡ್ಲಿ ಮನ್ಸೋರ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಲಂಡನ್/ ವಾಷಿಂಗ್ಟನ್ ವರದಿ: ಈಜಿಪ್ಟ್‌ನಲ್ಲಿ ಮತ್ತೆ ನಾಗರಿಕ ಸರ್ಕಾರ ರಚಿಸುವಂತೆ ಸೇನಾ ಮುಖ್ಯಸ್ಥರಿಗೆ ವಿಶ್ವದ ವಿವಿಧ ನಾಯಕರು ಆಗ್ರಹಿಸಿದ್ದಾರೆ.
ಈಜಿಪ್ಟ್‌ನಲ್ಲಿ ಮತ್ತೆ ಪ್ರಜಾಪ್ರಭುತ್ವ ಸರ್ಕಾರವನ್ನು ಅಲ್ಲಿನ ಸೇನಾ ಮುಖ್ಯಸ್ಥರು ಶೀಘ್ರದಲ್ಲೇ ಸ್ಥಾಪಿಸಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.
ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ. ಮೊದಲು ಆಂತರಿಕ ಗಲಭೆಗಳು ನಿಲ್ಲಬೇಕು ಎಂದು ಬ್ರಿಟನ್ ಒತ್ತಾಯಿಸಿದೆ. ಈಜಿಪ್ಟ್‌ಗೆ ಸೇನಾ ನೆರವು ನೀಡುವ ಪ್ರಶ್ನೆಯೇ ಇಲ್ಲ ಎಂದು ಬ್ರಿಟನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.