ADVERTISEMENT

ಆತ್ಮಹತ್ಯಾ ದಾಳಿ: 48 ಯೋಧರ ಸಾವು

ಏಜೆನ್ಸೀಸ್
Published 18 ಡಿಸೆಂಬರ್ 2016, 19:32 IST
Last Updated 18 ಡಿಸೆಂಬರ್ 2016, 19:32 IST

ಅಡೆನ್: ಅಡೆನ್‌ನ ಈಶಾನ್ಯ ಭಾಗದ ಸೇನಾಶಿಬಿರವೊಂದರ ಹೊರಭಾಗದಲ್ಲಿ ಭಾನುವಾರ ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಉಗ್ರನೊಬ್ಬ ನಡೆಸಿದ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಕನಿಷ್ಠ 48 ಮಂದಿ ಯೆಮನ್‌ ಯೋಧರು ಸಾವನ್ನಪ್ಪಿದ್ದಾರೆ.

ಸೇನಾಶಿಬಿರದ ಬಳಿ ವೇತನ ಪಡೆಯಲು ಬಂದ ಯೋಧರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆ­­­ಸಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

‘ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಅಡೆನ್‌ನ ಆರೋಗ್ಯ ಇಲಾಖೆ ಮುಖ್ಯಸ್ಥ ಅಬ್ದೆಲ್‌ ನಸೀರ್‌ ಅಲ್‌ ವಲಿ ತಿಳಿಸಿದ್ದಾರೆ.

ಅಡೆನ್‌ನ ವಿಶೇಷ ಭದ್ರತಾ ಪಡೆ ಕಚೇರಿ ಹೊರಭಾಗದಲ್ಲಿ ಯೋಧರು ಒಟ್ಟಾಗಿ ಸೇರಿದ್ದಾಗ ಆತ್ಮಹತ್ಯಾ ಬಾಂಬ್‌ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.  ಐಎಸ್‌ ಈ ದಾಳಿ ಹೊಣೆಯನ್ನು ವಹಿಸಿಕೊಂಡಿದ್ದು, ದಾಳಿಕೋರನನ್ನು ‘ಹುತಾತ್ಮ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.