ADVERTISEMENT

ಆತ್ಮಾಹುತಿ ದಾಳಿ: 12 ಸಾವು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಬಾಗ್ದಾದ್‌ (ಎಪಿ): ಕೆಫೆಯೊಂದರಲ್ಲಿ ನಡೆದ ಆತ್ಮಾ ಹುತಿ ದಾಳಿಯಲ್ಲಿ ಕನಿಷ್ಠ 12 ಜನ ಮೃತಪಟ್ಟು, 38 ಜನ ಗಾಯಗೊಂಡಿರುವ ಘಟನೆ ಇಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಫೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ  ಗ್ರಾಹಕರು ದೂರ್ದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಫುಟ್‌ಬಾಲ್‌ ಆಟವನ್ನು ವೀಕ್ಷಿಸುತ್ತಿದ್ದರು. ಆಟವನ್ನು  ನೋಡುವ ಸೋಗಿನಲ್ಲಿ ಕೆಫೆಗೆ ಬಂದಿದ್ದ ಆತ್ಮಾಹುತಿ ಬಾಂಬರ್‌ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.