ADVERTISEMENT

ಆತ್ಮಾಹುತಿ ದಾಳಿ: 36 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 16:45 IST
Last Updated 14 ಮಾರ್ಚ್ 2011, 16:45 IST

ಕುಂದುಜ್ (ಆಫ್ಘಾನಿಸ್ತಾನ): ಆಫ್ಘಾನಿಸ್ತಾನದ ಉತ್ತರ ಭಾಗದಲ್ಲಿನ ಸೇನಾ ನೇಮಕಾತಿ ಕೇಂದ್ರದ ಮೇಲೆ ಸೋಮವಾರ ತಾಲಿಬಾನ್ ಆತ್ಮಾಹುತಿ ದಾಳಿ ನಡೆದಿದ್ದು 36 ಮಂದಿ ಸತ್ತು 42 ಮಂದಿ ಗಾಯಗೊಂಡಿದ್ದಾರೆ. 

ಇರಾಕ್: ಸೇನಾ ನೆಲೆ ಮೇಲೆ ದಾಳಿ- 11 ಸಾವು
ಕನಾನ್ (ಇರಾಕ್) (ಎಎಫ್‌ಪಿ): ಇರಾಕ್‌ನ ದಿಯಾಲಾ ಪ್ರಾಂತ್ಯದ ಕನಾನ್‌ನಲ್ಲಿರುವ ಸೇನಾ ನೆಲೆಯೊಂದರ ಮೇಲೆ ಸೋಮವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ 11 ಮಂದಿ ಸಾವನ್ನಪಿದ್ದು, 14 ಜನರಿಗೆ ಗಾಯಗಳಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಸ್ಥಳೀಯ ಕಾಲಮಾನ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಆತ್ಮಹತ್ಯಾ ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ ಟ್ರಕ್‌ವೊಂದನ್ನು ಸೇನಾ ನೆಲೆಗೆ ನುಗ್ಗಿಸಿದರು, ಇದರಿಂದ ಸೈನಿಕರ ವಿಶ್ರಾಂತಿ ಗೃಹದ ಕಟ್ಟಡ (ಬ್ಯಾರಕ್) ಸಂಪೂರ್ಣವಾಗಿ ನೆಲ ಸಮವಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.