
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಹದಿನೆಂಟು ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಆದಿಮಾನವನ ತಲೆಬುರುಡೆಯೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ಆದಿಕಾಲದಲ್ಲಿ ಮಾನವನ ಏಕೈಕ ಪ್ರಭೇದ ಮಾತ್ರ ಇತ್ತು ಎಂಬ ಸಂಗತಿ ಇದರಿಂದ ತಿಳಿದು ಬಂದಿದೆ.
ಆದರೆ, ಆದಿ ಮಾನವರ ದೇಹ ಪ್ರಕೃತಿಯಲ್ಲಿ ಸ್ವಲ್ಪ ಬದಲಾವಣೆ ಇದ್ದಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜಾರ್ಜಿಯಾದ ಮಾನಿಸಿಯಲ್ಲಿ ಹೊಸ ತಲೆಬುರುಡೆ ಪತ್ತೆಯಾಗಿದೆ.ಇದುವರೆಗೆ ಪತ್ತೆಯಾಗಿರುವ ಆದಿಮಾನವನ ತಲೆಬುರುಡೆಗಳಲ್ಲೇ ಇದು ಹೆಚ್ಚು ಪರಿಪೂರ್ಣವಾಗಿರುವಂತಹದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.