ಭಿಷ್‌ಕೆಕ್ (ಇಟಾರ್-ಟಾಸ್): ಆಘ್ಫಾನಿಸ್ತಾನದ ಗಡಿಯಲ್ಲಿ ಹಾಷಿಷ್ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ‘ಕಳೆದ ಎರಡು ತಿಂಗಳಲ್ಲಿ ರಷ್ಯಾದಲ್ಲಿ ಒಂದು ಟನ್ ಹಾಷಿಷ್ ವಶಪಡಿಸಿಕೊಳ್ಳಲಾಗಿದೆ’ ಎಂದು ರಷ್ಯಾದ ಮಾದಕ ವಸ್ತು ನಿಯಂತ್ರಣ ಸಂಯುಕ್ತ ಸೇವೆಯ ವಿಕ್ಟರ್ ಇವನೋವ್ ಹೇಳಿದ್ದಾರೆ.‘ಇತ್ತೀಚೆಗೆ ಆಘ್ಫಾನಿಸ್ತಾನ 3.5 ಸಾವಿರ ಟನ್ ಹಾಷಿಷ್ ಉತ್ಪಾದಿಸಿದ್ದು ರಷ್ಯಾದ ಗಡಿಯಲ್ಲಿ ಅದರ ಒತ್ತಡ ಸುಮಾರು ಏಳು ಪಟ್ಟು ಹೆಚ್ಚಿತ್ತು’ಎಂದು ಅವರು ತಿಳಿಸಿದ್ದಾರೆ.
ಆಘ್ಫಾನಿಸ್ತಾನದಿಂದ ಉತ್ತರದೆಡೆಗೆ ಹಲವು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಒಟ್ಟು ಮೌಲ್ಯ ಸುಮಾರು 20 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಮಧ್ಯ ಏಷ್ಯದ ಗಡಿಯಿಂದ ರಷ್ಯಕ್ಕೆ ರವಾನಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆಘ್ಫಾನಿಸ್ತಾನದಲ್ಲಿ ಮಾದಕ ವಸ್ತುಗಳ ಉತ್ಪಾದನೆ ನಿಯಂತ್ರಿಸಲು ಆ ದೇಶದಲ್ಲಿ ಭೂ ದಾಖಲೆ ನಿರ್ಮಿಸಬೇಕು.
ಇದರಿಂದ ಶ್ರೀಮಂತ ಭೂ ಮಾಲೀಕರನ್ನು ಗುರುತಿಸಬಹುದು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ ನ್ಯಾಟೋ ಮತ್ತು ಅಮೆರಿಕದ ಸೇನಾಪಡೆ ಆಘ್ಫಾನಿಸ್ತಾನದಿಂದ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದೆ ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.