ADVERTISEMENT

ಆಹಾರದಲ್ಲಿ ಕ್ಯಾಡ್ಮಿಯಂ: ಕ್ಯಾನ್ಸರ್ ಭಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಹೂಸ್ಟನ್ (ಪಿಟಿಐ): ವಿಷಯುಕ್ತ ಲೋಹ ಕ್ಯಾಡ್ಮಿಯಂ ಅಂಶ ಹೆಚ್ಚಿರುವ ಆಹಾರ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವೂ ಅಧಿಕ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

`ಅಮೇರಿಕದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ~ ಈ ವರದಿ ಪ್ರಕಟಿಸಿದೆ. ಋತುಬಂಧವಾದ 55,987 ಮಹಿಳೆಯರಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿತ್ತು.
 
ಕ್ಯಾಡ್ಮಿಯಂ ಅಂಶವಿರುವ ಆಹಾರ ಸೇವಿಸಿದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಗಲುವ ಪ್ರಮಾಣ ಇತರ ಮಹಿಳೆಯರಿಗಿಂತ ಶೇ 21ರಷ್ಟು ಹೆಚ್ಚಿದೆ ಎಂದು ಈ ವರದಿ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.