ADVERTISEMENT

ಆಹಾರ ಸೇವನೆ: ಧೈರ್ಯ ತುಂಬಿದ ಸಚಿವರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಫುಕುಶಿಮಾ ಸ್ಥಾವರದಿಂದ 120 ಕಿ.ಮೀ. ವ್ಯಾಪ್ತಿಯೊಳಗಿನ ಹಾಲು, ಸೊಪ್ಪು ಮತ್ತು ನಲ್ಲಿ ನೀರಿನಲ್ಲಿ ವಿಕಿರಣಕಾರಕಗಳು ಪತ್ತೆಯಾಗಿರುವುದಾಗಿ ಶುಕ್ರವಾರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ, ಜನ ಯಾವ ಆಹಾರ ಸೇವಿಸಬೇಕೆಂಬ ಬಗ್ಗೆ ಕಂಗಾಲಾಗಿ ಹೋಗಿದ್ದಾರೆ.

ಆದರೆ ಜಪಾನಿನ ಆರೋಗ್ಯ ಸಚಿವ ಯೋಕೋ ಕೋಮಿಯಾಮ ಈ ಬಗೆಗಿನ ಜನರ ಆತಂಕವನ್ನು ಶಮನಗೊಳಿಸುವ ಯತ್ನ ನಡೆಸಿದ್ದಾರೆ. ‘ವ್ಯಕ್ತಿಯೊಬ್ಬ ಪ್ರತಿ ದಿನ ಒಂದು ಕೆ.ಜಿ. ಸೊಪ್ಪನ್ನು ನಿರಂತರ ಒಂದು ವರ್ಷ ಸೇವಿಸಿದರೆ ಮಾತ್ರ ವಿಕಿರಣದ ದುಷ್ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಪ್ರತಿದಿನ ನಿರಂತರ ಒಂದು ವರ್ಷ ಹಾಲು ಸೇವಿಸಿದರೆ ವ್ಯಕ್ತಿಯೊಬ್ಬ ಒಮ್ಮೆ ಸಿ.ಟಿ. ಸ್ಕ್ಯಾನಿಂಗ್‌ಗೆ ಒಳಪಟ್ಟಾಗ ಕಂಡುಬರುವಷ್ಟು ವಿಕಿರಣ ಮಾತ್ರ ಕಂಡುಬರಬಹುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT