ADVERTISEMENT

ಇರಾಕ್‌ ಹಿಂಸಾಚಾರ: 18 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಬಾಗ್ದಾದ್‌ (ಐಎಎನ್‌ಎಸ್‌) : ಇರಾಕ್‌­ನಲ್ಲಿ ನಡೆದ ಹಿಂಸೆಗೆ 18 ಮಂದಿ ಬಲಿಯಾಗಿದ್ದಾರೆ. 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಧ್ಯ ಬಾಗ್ದಾದ್‌ನ  ವಾಜೀರಿಯಾ ಜಿಲ್ಲೆಯ ಮದ್ಯಅಂಗಡಿಯ ಹತ್ತಿರ ಅಪರಿಚಿತ ಬಂದೂಕು­ಧಾರಿ­ಯೊಬ್ಬ ನಡೆಸಿದ ಗುಂಡಿನ ದಾಳಿಗೆ 9 ಮಂದಿ ಬಲಿಯಾದರು 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿ­ದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳವೆ.

ದಕ್ಷಿಣ ಬಾಗ್ದಾದ್ ದೋರಾ ಜಿಲ್ಲೆಯ ಮಾರುಕಟ್ಟೆ ರಸ್ತೆ ಬದಿಯಲ್ಲಿ ಬಾಂಬ್‌ ಸ್ಪೋಟಕ್ಕೆ ಒಬ್ಬ ಬಲಿಯಾಗಿದ್ದಾನೆ. ಉತ್ತರ ಇರಾಕ್‌ನಲ್ಲಿ ನಡೆದ ಸ್ಪೋಟಕ್ಕೆ 3 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.