ಬಾಗ್ದಾದ್ (ಎಪಿ/ಐಎಎನ್‌ಎಸ್): ಇರಾಕ್ ದೇಶಾದ್ಯಂತ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 44 ಮಂದಿ ಸಾವಿಗೀಡಾಗಿದ್ದು, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಸ್ಥಿರತೆಗಾಗಿ ಅರಬ್ ಜಗತ್ತಿನ ಉನ್ನತ ನಾಯಕರು ಬಾಗ್ದಾದ್ ಸಭೆ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಶಿಯಾ ಪಂಗಡದ ಮುಸ್ಲಿಮರು ಹಾಗೂ ಪೊಲೀಸರನ್ನು ಗುರಿಯಾಗಿಸಿ ದೇಶಾದ್ಯಂತ ಹಲವು ಕಡೆ ಬಾಂಬ್ ಸ್ಫೋಟಗಳು ಸಂಭವಿಸಿವೆ.
ಇಲ್ಲಿಗೆ 250 ಕಿ.ಮೀ.ದೂರದ ಕಿರ್ಕುಕ್ ಪ್ರದೇಶದಲ್ಲೇ 3 ಸ್ಫೋಟಗಳು ಸಂಭವಿಸಿವೆ. ಅಲವಿ, ಹಿಲ್ಲಾ, ಕಾರಬಾಲ , ಫಲುವಾ ಹಾಗೂ ರಮದಿ ಪ್ರದೇಶಗಳಲ್ಲಿ ಆತ್ಮಹತ್ಯಾ ದಾಳಿಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.