ADVERTISEMENT

ಇರಾನ್ ಭೂಕಂಪನ: 250 ಸಾವು, ಸಹಸ್ರಾರು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 9:00 IST
Last Updated 12 ಆಗಸ್ಟ್ 2012, 9:00 IST
ಇರಾನ್ ಭೂಕಂಪನ: 250 ಸಾವು, ಸಹಸ್ರಾರು ಮಂದಿಗೆ ಗಾಯ
ಇರಾನ್ ಭೂಕಂಪನ: 250 ಸಾವು, ಸಹಸ್ರಾರು ಮಂದಿಗೆ ಗಾಯ   

ಟೆಹರಾನ್ (ಐಎಎನ್ಎಸ್/ ಆರ್ ಐ ಎ ನೊವೊಸ್ತಿ): ವಾಯವ್ಯ ಇರಾನ್ ನಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪನಗಳಲ್ಲಿ ಕನಿಷ್ಠ 250 ಮಂದಿ ಮೃತರಾಗಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

ರಿಕ್ಟರ್ ಮಾಪಕದಲ್ಲಿ 6.2 ಗಾತ್ರದಷ್ಟಿದ್ದ ಭೂಕಂಪನ ಸಂಭವಿಸಿದ ಒಂದು ಗಂಟೆ ಬಳಿಕ ಅದೇ ಪ್ರಾಂತದ ವರ್ಝಾಖನ್ ನಲ್ಲಿ ಇನ್ನೊಂದು ಪ್ರಬಲ ಭೂಕಂಪನ ಸಂಭವಿಸಿ ಹೆಚ್ಚಿನ ಹಾನಿಯನ್ನು ಉಂಟು ಮಾಡಿದೆ. ಎರಡನೇ ಭೂಕಂಪನ ರಿಕ್ಟರ್ ಮಾಪಕದಲ್ಲಿ 6 ಗಾತ್ರದಲ್ಲಿತ್ತು ಎಂದು ವರದಿಗಳು ಹೇಳಿವೆ.

~ಕನಿಷ್ಠ 250 ಮಂದಿ ಮೃತರಾಗಿ 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ~ ಎಂದು ಇರಾನಿನ ಒಳಾಡಳಿತ ಉಪ ಸಚಿವ ಹಸನ್ ಖದ್ದಾಮಿ ಹೇಳಿದರು.

ಭೂಕಂಪನಗಳ ಬಳಿಕ ಕನಿಷ್ಠ 35 ಬಾರಿ ಭೂಮಿ ಕಂಪಿಸಿದ ಪರಿಣಾಮವಾಗಿ ಸಹಸ್ರಾರು ಮಂದಿ ಮನೆಳಿಂದ ಹೊರಗೇ ಉಳಿಯುವಂತಾಯಿತು. ಒಟ್ಟಾರೆ 110 ಗ್ರಾಮಗಳು ಭೂಕಂಪನದಿಂದ ಹಾನಿಗೊಳಗಾಗಿವೆ.

ಇರಾನಿನಲ್ಲಿ 1990ರಲ್ಲಿ ಅತಿ ಭೀಕರ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.7 ಗಾತ್ರದಲ್ಲಿಷ್ಟ ಈ ಭೂಕಂಪನದಲ್ಲಿ ಸುಮಾರು 37,000 ಮಂದಿ ಮೃತರಾಗಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇರಾನಿನ ವಾಯವ್ಯ ಭಾಗದ ಪ್ರಾಂತ್ಯಗಳಾದ ಗಿಲಾನ್ ಮತ್ತು ಝಂಜಾನ್ ನಲ್ಲಿ ಈ ಭೂಕಂಪನಗಳು ಸಂಭವಿಸಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.