ADVERTISEMENT

ಈಜಿಪ್ಟ್: ಸಂವಿಧಾನ ತಿದ್ದುಪಡಿಗೆ ಮತದಾನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಕೈರೋ (ಪಿಟಿಐ): ಪಾರದರ್ಶಕ ಪ್ರಜಾಪ್ರಭುತ್ವದ ಆಡಳಿತವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಈಜಿಪ್ಟಿನ ಜನತೆ ಅದರ ಮೊದಲ ಹೆಜ್ಜೆಯಾಗಿ ಮಹತ್ತರ ಸಾಂವಿಧಾನಿಕ ತಿದ್ದುಪಡಿಗಳಿಗಾಗಿ ಶನಿವಾರ ಭಾರಿ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ.

ಹೋಸ್ನಿ ಮುಬಾರಕ್ ಪದಚ್ಯುತಿಯ ಬಳಿಕ ಮೊದಲ ಬಾರಿಗೆ ಮತದಾನದ ಅವಕಾಶ ಪಡೆದ ಜನರು ರಾಷ್ಟ್ರಕ್ಕೆ ಕಾಯಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿ ಮತ್ತು ಸಂವಿಧಾನದ ತಿದ್ದಪಡಿಗಳಿಗೆ ಸಂಬಂಧಿಸಿದಂತೆ ನಡೆದ ಮತದಾನದಲ್ಲಿ ಬೆಳಗಿನಿಂದಲೂ ಅತ್ಯುತ್ಸಾಹದಿಂದ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.