ADVERTISEMENT

ಉಗ್ರರಿಂದ ಏಳು ಪೊಲೀಸರ ಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಅಡೆನ್ (ಎಎಫ್‌ಪಿ): ಅಲ್ ಖೈದಾ ಸಂಘಟನೆಯ ಶಂಕಿತ ಉಗ್ರರು ಯೆಮನ್‌ನ ಆಗ್ನೇಯ ಭಾಗದ ಚೆಕ್‌ಪೋಸ್ಟ್‌ವೊಂದರ ಮೇಲೆ ಭಾನುವಾರ ದಾಳಿ ನಡೆಸಿದ್ದು, ಇದರಿಂದ ಏಳು ಪೊಲೀಸರು ಹತರಾಗಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
 
`ಎರಡು ವಾಹನಗಳಲ್ಲಿ ಬಂದ ಉಗ್ರರ ಗುಂಪೊಂದು ಶಿಬಾಮ್‌ನ ಚೆಕ್‌ಪೋಸ್ಟ್ ಮೇಲೆ ಮಿಷಿನ್ ಗನ್‌ಗಳಿಂದ ಗುಂಡಿನ ದಾಳಿ ನಡೆಸಿತು~ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.