
ಪಿಟಿಐಢಾಕಾ : ಇಸ್ಲಾಮಿ ಉಗ್ರಗಾಮಿ ಮುಖಂಡರ ವಿರುದ್ಧ ಕೋರ್ಟ್‌ಗಳಲ್ಲಿ ವಾದ ಮಾಡುತ್ತಿರುವ ಬಾಂಗ್ಲಾದೇಶದ ಖ್ಯಾತ ಹಿಂದೂ ವಕೀಲ ರತೀಶ್ ಚಂದ್ರ ಭೌಮಿಕ್ ಅವರು ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಳೆದ ಶುಕ್ರವಾರ ಬೆಳಿಗ್ಗೆ ಮನೆಯಿಂದ ಹೋದವರು ಮನೆಗೆ ಮರಳಲಿಲ್ಲ. ಮೊಬೈಲ್ ದೂರವಾಣಿ ‘ಸ್ವಿಚ್‌ಡ್ ಆಫ್’ ಆಗಿತ್ತು. ಉಗ್ರ ಜಮಾತ್ ಉಲ್ ಮುಜಾಹಿದ್ದೀನ್‌ನ ವಿರುದ್ಧ ಇವರು ವಾದ ಮಂಡಿಸಿದ್ದರು. 15 ದಿನಗಳ ಹಿಂದೆ ಇವನಿಗೆ ಕೋರ್ಟ್ ಮರಣದಂಡನೆ ವಿಧಿಸಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.