ADVERTISEMENT

ಉಡುಪು ಖರೀದಿಗೆ ಮಹಿಳೆಯರಿಂದ ಶೇ 18ರಷ್ಟು ವೆಚ್ಚ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಲಂಡನ್ (ಪಿಟಿಐ): ಮಹಿಳೆಯರು ಪ್ರತಿ ವರ್ಷ ತಮ್ಮ ವಾರ್ಷಿಕ ಆದಾಯದ ಶೇ 18ರಷ್ಟನ್ನು ಉಡುಪುಗಳ ಖರೀದಿಗೆ ವೆಚ್ಚಮಾಡುತ್ತಾರೆ. ಅಲ್ಲದೆ ಈ ಉಡುಪು ಖರೀದಿ ಮಹಿಳೆಯರ ಕೆಲಸ ನಿರ್ವಹಣೆ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.

ಕೆಲಸ ನಿರ್ವಹಿಸುವ ಸ್ಥಳದಲ್ಲಿ ಉತ್ತಮ ಉಡುಗೆಗಳನ್ನು ತೊಡುವ ಬಗ್ಗೆ ಮಹಿಳೆಯರು ಆಸಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಉಡುಪುಗಳನ್ನು ಖರೀದಿಸಲು ಶೇ.18ರಷ್ಟು ಸಂಬಳವನ್ನು ವೆಚ್ಚ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.