
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಉತ್ತರಪ್ರದೇಶದ ಅಭಿವೃದ್ಧಿಗೆ ಅಮೆರಿಕದ ಕಂಪೆನಿಗಳು `ಪ್ರಗತಿ ಕಾರ್ಯಸೂಚಿ~ ಸಿದ್ಧಪಡಿಸುತ್ತಿವೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೋರಿಕೆಯ ಮೇರೆಗೆ ಇದನ್ನು ಸಿದ್ಧಪಡಿಸಲಾಗುತ್ತಿದೆ.
ಸಮಾಜವಾದಿ ಪಕ್ಷದ ಆಡಳಿತ ನೂರನೇ ದಿನದ ಆಚರಣೆಯ ಒಳಗಾಗಿ ಸಿದ್ಧಪಡಿಸಿಕೊಡುವಂತೆ ಕೋರಲಾಗಿದೆ ಎಂದು ಅಮೆರಿಕ ಭಾರತ ಬಿಸಿನೆಸ್ ಕೌನ್ಸಿಲ್ ಮೂಲಗಳು ತಿಳಿಸಿವೆ.
ಕಾರ್ಯಸೂಚಿಗೆ ಒಪ್ಪಿಗೆ ದೊರೆತ ನಂತರ ಅದನ್ನು ಜಾರಿ ಮಾಡಲು ಅಧಿಕಾರಿಗಳು ಉತ್ತರಪ್ರದೇಶಕ್ಕೆ ತೆರಳಲಿದ್ದಾರೆ ಎಂದು ಕೌನ್ಸಿಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.