ADVERTISEMENT

ಉತ್ತರ- ದಕ್ಷಿಣ ಕೊರಿಯಾ: ಉನ್ನತ ಮಟ್ಟದ ಮಾತುಕತೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಸೋಲ್ (ಎಎಫ್‌ಪಿ): ಅಣ್ವಸ್ತ್ರ ದಾಳಿ ಭೀತಿಯನ್ನು ನಿವಾರಿಸಿ, ಉದ್ವಿಗ್ನ ಸ್ಥಿತಿ ಶಮನಗೊಳಿಸುವ ಮತ್ತು ವಿಶ್ವಾಸ ಮರುಸ್ಥಾಪಿಸುವ ಉದ್ದೇಶದಿಂದ ನಡೆದ ಸುದೀರ್ಘ ಸಂಧಾನ ಮಾತುಕತೆಯ ಫಲವಾಗಿ ಸೋಲ್‌ನಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾದ ಉನ್ನತ ಮಟ್ಟದ ಸಭೆ ನಡೆಸಲು ಒಪ್ಪಿಕೊಳ್ಳಲಾಗಿದೆ.

ಗಡಿ ಗ್ರಾಮ ಪನಮುಂಜೊಮ್‌ನಲ್ಲಿ ಸೋಮವಾರ ಉನ್ನತ ಮಟ್ಟದ ಸಭೆಯ ಪೂರ್ವಭಾವಿ ಮಾತುಕತೆಗಳು ನಡೆದಿವೆ. ನಿಯೋಗದ ನೇತೃತ್ವ ಯಾರು ವಹಿಸಬೇಕೆಂಬ ಬಗ್ಗೆ ಮತ್ತು ಮಾತುಕತೆಯ ವಿಷಯಗಳ ಬಗ್ಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿದಿಲ್ಲ. ಆದರೂ ಮಾತುಕತೆ ಬಳಿಕ ಎರಡೂ ಕಡೆಯ ಅಧಿಕಾರಿಗಳು ಪ್ರತ್ಯೇಕ ಹೇಳಿಕೆ ನೀಡಿ ಉನ್ನತ ಮಟ್ಟದ ಮಾತುಕತೆ ನಡೆಯುವ ವಿಚಾರವನ್ನು ಪ್ರಕಟಿಸಿದ್ದಾರೆ.

ಏಪ್ರಿಲ್- ಮೇನಲ್ಲಿ ಅಣ್ವಸ್ತ್ರ ಯುದ್ಧದ ಭೀತಿ ತಲೆದೋರಿ ಭಾರಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.