ADVERTISEMENT

ಉಪಗ್ರಹ ಉಡಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:25 IST
Last Updated 24 ಫೆಬ್ರುವರಿ 2011, 16:25 IST

ವಾಷಿಂಗ್ಟನ್ (ಎಎಫ್‌ಪಿ): ನಾಸಾ ತನ್ನ ಪ್ರತಿಷ್ಠಿತ ಭೂ ವಿಚಕ್ಷಣಾ ಉಪಗ್ರಹದ ಉಡಾವಣೆಗೆ 15 ನಿಮಿಷ ಬಾಕಿ ಇರುವಾಗ ಅದನ್ನು ನಿಲ್ಲಿಸಿದ್ದು, ಉಡಾವಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಬುಧವಾರ ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿ ಕಡೆಗಳಿಗೆಯಲ್ಲಿ ಅನಿರೀಕ್ಷಿತವಾಗಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಉಪಗ್ರಹ  ಉಡಾವಣೆಯನ್ನು ತುರ್ತಾಗಿ ನಿಲ್ಲಿಸಲಾಯಿತು. ಮುಂದಿನ 24 ಗಂಟೆಯೊಳಗೆ ಉಪಗ್ರವನ್ನು ಉಡಾಯಿಸಲಾಗುವುದು ಎಂದು ನಾಸಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.