ADVERTISEMENT

ಎವರೆಸ್ಟ್‌ ಏರಲು ಹೊರಟ ಹರಿಯಾಣದ ‘ಕಿರಿಯ’ ಯುವತಿ

ಪಿಟಿಐ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಶಿವಾಂಗಿ ಪಾಠಕ್‌
ಶಿವಾಂಗಿ ಪಾಠಕ್‌   

ಕಠ್ಮಂಡು : ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಏರಲು 16 ವರ್ಷದ ಯುವತಿಯೊಬ್ಬರು ಸನ್ನದ್ಧರಾಗಿದ್ದು, ಅವರು ಯಶಸ್ವಿಯಾದರೆ ಈ ಶಿಖರ ಏರಿದ ‘ಜಗತ್ತಿನ ಕಿರಿ ವಯಸ್ಸಿನ ಹೆಣ್ಣುಮಗಳು‘ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

‘ಹರಿಯಾಣದ ಹಿಸ್ಸಾರ್‌ನ ಶಿವಾಂಗಿ ಪಾಠಕ್‌ ಶುಕ್ರವಾರ ನೇಪಾಳದ ಲುಕ್ಲಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದು ಶಿಖರದ ಪ್ರವೇಶ ದ್ವಾರವಾಗಿದೆ. ಅಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಶಿಖರ ಏರುವ ಪರವಾನಗಿ ಪಡೆಯಲಿದ್ದಾರೆ’ ಎಂದು ಚಾರಣ ಏರ್ಪಡಿಸಿರುವ ‘ಸೆವೆನ್‌ ಸಮ್ಮಿಟ್‌ ಟ್ರೆಕ್ಸ್‌’ನ ವ್ಯವಸ್ಥಾಪಕ ನಿರ್ದೇಶಕ ಪೆಂಬಾ ಶೆರ್ಪ ತಿಳಿಸಿದ್ದಾರೆ.

‘ಮೌಂಟ್‌ ಎವರೆಸ್ಟ್‌ ಶಿಖರ ಏರುವುದು ನನ್ನ ಬಾಲ್ಯದ ಕನಸು. ಇದನ್ನು ಏರಿದ ಅಂಗವಿಕಲ ಮಹಿಳೆ ಅರುಣಿಮಾ ಸಿನ್ಹಾ ನನಗೆ ಮಾದರಿ. ಮಹಿಳೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತೋರಿಸುವುದು ನನ್ನ ಮುಖ್ಯ ಉದ್ದೇಶ. ನನ್ನ ಪೋಷಕರಾದ ರಾಜೇಶ್‌ ಮತ್ತು ಆರತಿ ನನ್ನ ಪ್ರೇರಣೆ’ ಎಂದು ಶಿವಾಂಗಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.