ADVERTISEMENT

ಎಸ್ಸಾರ್ ಗ್ರೂಪ್‌ನಿಂದ ಮಾವೋವಾದಿಗಳಿಗೆ ಹಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಛತ್ತೀಸ್‌ಗಡದಲ್ಲಿ ಗಣಿಗಾರಿಕೆ ನಡೆಸಲು ಬಹಳ ಆಸಕ್ತಿ ವಹಿಸಿದ್ದ ರುಯಾಸ್‌ಗೆ ಸೇರಿದ ಎಸ್ಸಾರ್ ಗ್ರೂಪ್ ಆ ರಾಜ್ಯದಲ್ಲಿ ತನ್ನ ಕಾರ್ಯ ಚಟುವಟಿಕೆಗಳ ಸುರಕ್ಷತೆಗಾಗಿ ಮಾವೋವಾದಿಗಳಿಗೆ ಹಣ ಪಾವತಿಸುತ್ತಿತ್ತು ಎಂಬ ಸಂಗತಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಆದರೆ, ಇದನ್ನು ಎಸ್ಸಾರ್ ಗ್ರೂಪ್ ತಳಬುಡವಿಲ್ಲದ ವಿಷಯ ಎಂದು ತಳ್ಳಿ ಹಾಕಿದೆ.

`ಕಂಪೆನಿಯ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಮಾಡದಿರಲೆಂದು ಮಾವೋವಾದಿಗಳಿಗೆ ಭಾರಿ ಮೊತ್ತದ ಹಣ ನೀಡಲಾಗಿದೆ~ ಎಂದು ಎಸ್ಸಾರ್ ಕಂಪೆನಿಯ ಹಿರಿಯ ಪ್ರತಿನಿಧಿ 2010ರ ಜನವರಿ 11ರಂದು ಮುಂಬೈನಲ್ಲಿರುವ ರಾಜತಾಂತ್ರಿಕ ಕಚೇರಿಗೆ ತಿಳಿಸಿದ್ದರು ಎಂಬುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿರುವ ವಿಷಯದಲ್ಲಿ ಉಲ್ಲೇಖಿಸಲಾಗಿದೆ.
 
`ಕಂಪೆನಿಯೊಂದಿಗಿನ ಈ ಒಪ್ಪಂದದಿಂದ ಮಾವೋವಾದಿಗಳು ಹಿಂದೆ ಸರಿದಾಗ, ಎಸ್ಸಾರ್ ಕಂಪೆನಿಯ ಆಸ್ತಿ ಹಾನಿ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆಯಿದ್ದ ಕಾರಣ ಇವರನ್ನು ಬಗ್ಗು ಬಡಿಯಲು ಮತ್ತೊಂದು ಮಾವೋವಾದಿಗಳ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು~ ಎಂದು ಅವರು ತಿಳಿಸಿದ್ದನ್ನು ಪ್ರಸ್ತಾಪಿಸಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.