ADVERTISEMENT

ಐಎಂ ಅಪಾಯಕಾರಿ ಸಂಘಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್, (ಪಿಟಿಐ): ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಅಮೆರಿಕ ಸರ್ಕಾರವು ಭಾರತೀಯ ಮೂಲದ ಅಪಾಯಕಾರಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದೆ.

ಭಾರತದ ಗಡಿಯೊಳಗೆ ಈ ಸಂಘಟನೆಯ ಇದುವರೆಗೆ ಅನೇಕ ದಾಳಿಯನ್ನು ನಡೆಸಿ ನೂರಾರು ನಾಗರಿಕರ ಸಾವಿಗೆ ಕಾರಣವಾಗಿದೆ ಹಾಗೂ ಕಳೆದ ಜುಲೈ 13ರಂದು ಮುಂಬೈಯಲ್ಲಿ ನಡೆದ ಬಾಂಬ್ ದಾಳಿಗೂ ಇದೇ ಸಂಘಟನೆ ಕಾರಣವೆಂಬ ಶಂಕೆ ಇದೆ ಎಂದು ಅಮೆರಿಕದ ವಿದೇಶಾಂಗ ಖಾತೆಯ ವಕ್ತಾರ ಮಾರ್ಕ್ ಟೋನರ್  ತಿಳಿಸಿದ್ದಾರೆ.

ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವ ಅಮೆರಿಕ, ಇದೊಂದು ಅತಿ ಅಪಾಯಕಾರಿ ನಿಷೇಧಿತ ಸಂಘಟನೆ ಎಂದು ತಿಳಿಸಿದೆ. 

ಭಯೋತ್ಪಾದನೆ ದಮನ ವಿಚಾರದಲ್ಲಿ ಅಮೆರಿಕವು ಭಾರತದ ಜತೆ ಸಹಕಾರವನ್ನು ಮುಂದುವರಿಸುತ್ತದೆ ಎಂದು ಟೋನರ್ ತಿಳಿಸಿದ್ದಾರೆ.

ಅಮೆರಿಕವು  2002ರಲ್ಲಿ ಅಂತರರಾಷ್ಟ್ರೀಯ ಬಬ್ಬರ್ ಖಲ್ಸಾ ಮತ್ತು ಅಂತರರಾಷ್ಟ್ರೀಯ ಸಿಖ್ ಯುವ ಸಂಘಟನೆಯನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.