ADVERTISEMENT

ಐದು ವರ್ಷದ ಪೋರ ಪೈಲಟ್!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೀಜಿಂಗ್ (ಐಎಎನ್‌ಎಸ್): ಚೀನಾದ ಐದು ವರ್ಷದ ಬಾಲಕನೊಬ್ಬ ಅತಿ ಕಿರಿಯ ವಯಸ್ಸಿನ ಪೈಲಟ್ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಇವನ ಹೆಸರು ಗಿನ್ನಿಸ್ ವಿಶ್ವದಾಖಲೆಗೂ ಸೇರಿದೆ.

ಯಿದೆ (ಡೌಡೌ) ಎಂಬ ಬಾಲಕ ಬೀಜಿಂಗ್‌ನ ವನ್ಯಜೀವಿ ಉದ್ಯಾನವೊಂದರ ಸುತ್ತ 35 ನಿಮಿಷಗಳ ಕಾಲ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಹಗುರ ವಿಮಾನವೊಂದರಲ್ಲಿ ಶನಿವಾರ ಹಾರಾಟ ನಡೆಸಿದ ಎಂದು ಚೀನಾ ಮಧ್ಯಮ ಮಂಗಳವಾರ ವರದಿ ಮಾಡಿದೆ.

ಡೌಡೌ 2012ರಲ್ಲಿ ಅರೆನಗ್ನನಾಗಿ ಶೂನ್ಯಕ್ಕಿಂತ 13 ಡಿಗ್ರಿ ಕಡಿಮೆ ತಾಪಮಾನದ ಮಂಜಿನ ಮೇಲೆ ಓಡಿ ಸುದ್ದಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.