ಕೋಪೆನ್‌ಹೆಗನ್ (ಐಎಎನ್‌ಎಸ್): ಸುಮಾರು ಏಳು ನಾವಿಕ ಸಿಬ್ಬಂದಿ ಇದ್ದ ಡೆನ್ಮಾರ್ಕ್‌ನ ಹಡಗೊಂದನ್ನು ಸೋಮಾಲಿಯಾ ಕರಾವಳಿ ತೀರದ ಕಡಲ್ಗಳ್ಳರು ಒತ್ತೆಯಾಳಾಗಿ ಇರಿಸಿರುವುದಾಗಿ ಡೆನ್ಮಾರ್ಕ್ ವಿದೇಶಾಂಗ ಸಚಿವಾಲಯ ಸೋಮವಾರ ಸಂಜೆ ತಿಳಿಸಿದೆ. ಈ ಹಡಗಿನಲ್ಲಿ 12ರಿಂದ 16 ವರ್ಷದೊಳಗಿನ ಮೂವರು ಮಕ್ಕಳು, ಅವರ ಪೋಷಕರು ಹಾಗೂ ಇತರ ಇಬ್ಬರು ಯುವ ಸಹಾಯಕರು ಸೇರಿ ಐವರು ಸದಸ್ಯರ ಕುಟುಂಬವೊಂದು ಪ್ರಯಾಣಿಸುತ್ತಿತ್ತು ಎಂದು ‘ಕ್ಸಿನ್ಹುವಾ’ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.