ಲಂಡನ್ (ಪಿಟಿಐ): ಶತಮಾನಗಳಿಂದ ಕುತೂಹಲದ ಕೇಂದ್ರಗಳಾಗಿರುವ `ಕಪ್ಪುರಂಧ್ರ~ (ಬ್ಲ್ಯಾಕ್ ಹೋಲ್)ಗಳ ತೂಕ, ಗಾತ್ರ ಮತ್ತು ಆಹಾರ ಪದ್ಧತಿ ಕುರಿತು ಖಗೋಳ ವಿಜ್ಞಾನಿಗಳು ಹೊಸದೊಂದು ಸಿದ್ಧಾಂತವನ್ನು ಮಂಡಿಸಿದ್ದಾರೆ.
ಖಗೋಳ ವಿಜ್ಞಾನಿಗಳಿಗೆ ಸದಾ ಕೌತುಕದ ವಸ್ತುಗಳಾಗಿರುವ ಕಪ್ಪುರಂಧ್ರಗಳ ಆಹಾರ ಪದ್ಧತಿ ಮತ್ತು ಗಾತ್ರಗಳ ಬಗ್ಗೆ ಜಂಟಿಯಾಗಿ ಸಂಶೋಧನೆ ನಡೆಸಿರುವ ಬ್ರಿಟನ್ ಮತ್ತು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ನಿರ್ದಿಷ್ಟ ಆಹಾರ ಕ್ರಮವನ್ನು ಹೊಂದಿರದ ಕಪ್ಪು ರಂಧ್ರಗಳು ಹೇಗೆ ಗಾತ್ರದಲ್ಲಿ ಸೂರ್ಯನಿಗಿಂತ ಅದೆಷ್ಟೋ ಪಟ್ಟು ದೊಡ್ಡದಾಗಿ ಬೆಳೆಯುತ್ತಿವೆ ಎನ್ನುವುದನ್ನು ವಿವರಿಸಿದ್ದಾರೆ.
ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಆಕಾಶಕಾಯ ಮತ್ತು ಅನಿಲ ಉಂಡೆಗಳನ್ನು ನುಂಗಿ ಹಾಕುವ ಕಪ್ಪುರಂಧ್ರಗಳಿಗೆ ನಿರ್ದಿಷ್ಟ ಆಹಾರಕ್ರಮ ಇಲ್ಲ. ಎದುರಿಗೆ ಸಿಕ್ಕ ಎಲ್ಲ ಆಕಾಶಕಾಯಗಳು ಆಪೋಶನಕ್ಕೆ ತೆಗೆದುಕೊಳ್ಳುತ್ತ ಸಾಗುತ್ತವೆ. ಹೀಗಾಗಿ ಗಾತ್ರ ಮತ್ತು ತೂಕದಲ್ಲಿ ಸೂರ್ಯನಿಗಿಂತ ಕೋಟಿ ಪಟ್ಟು ವೇಗವಾಗಿ ಬೆಳೆಯುತ್ತವೆ ಎನ್ನುವುದು ವಿಜ್ಞಾನಿಗಳ ಹೊಸ ವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.