ADVERTISEMENT

ಕರಾಚಿಯಲ್ಲಿ ಬಾಂಬ್ ಸ್ಫೋಟ 5 ಸಾವು, 50 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2012, 19:59 IST
Last Updated 29 ಡಿಸೆಂಬರ್ 2012, 19:59 IST
ಕರಾಚಿಯಲ್ಲಿ ಶನಿವಾರ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಧ್ವಂಸಗೊಂಡ ಬಸ್ 	-ಎಎಫ್‌ಪಿ ಚಿತ್ರ
ಕರಾಚಿಯಲ್ಲಿ ಶನಿವಾರ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಧ್ವಂಸಗೊಂಡ ಬಸ್ -ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್ (ಪಿಟಿಐ): ಕರಾಚಿಯ ರೈಲು ನಿಲ್ದಾಣದ ಎದುರು ಬಸ್ಸಿನಲ್ಲಿ ಶಕ್ತಿಯುತ ಬಾಂಬ್ ಸ್ಫೋಟಿಸಿ ಐದು ಜನರು ಸತ್ತಿದ್ದು, 50 ಜನರಿಗೆ ಗಾಯಗಳಾಗಿವೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕರಾಚಿಗೆ ಬಂದಾಗ ಉಳಿದುಕೊಳ್ಳುವ ತಾಣದಿಂದ ಕೇವಲ ಅರ್ಧ ಕಿ. ಮೀ. ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

ದಂಡು ರೈಲು ನಿಲ್ದಾಣದ ಬಳಿಯ ಬಸ್ ನಿಲ್ದಾಣದಿಂದ ಬಸ್ ಹೊರಟ ಕೆಲವೇ ಕ್ಷಣದಲ್ಲಿ ಬಾಂಬ್ ಸ್ಫೋಟಿಸಿದೆ. ಸ್ಫೋಟದ ರಭಸಕ್ಕೆ ದೇಹಗಳು ಛಿದ್ರಛಿದ್ರವಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಿನ್ನಾ ಆಸ್ಪತ್ರೆಗೆ ದಾಖಲಾಗಿರುವ 48 ಜನರ ಪೈಕಿ ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.