ADVERTISEMENT

ಕಲಹಪ್ರಿಯ ಜಾಬ್ಸ್...!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ವಾಷಿಂಗ್ಟನ್ (ಎಎಫ್‌ಪಿ):  ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನರಾದ `ಆ್ಯಪಲ್~ ಜನಕ ಸ್ಟೀವ್ ಜಾಬ್ಸ್ ಅವರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಅವರ ಸಿಡುಕು ಸ್ವಭಾವ ಅಷ್ಟಾಗಿ ಯಾರಿಗೂ ಪರಿಚಯವಿಲ್ಲ. ಅದನ್ನು ಅವರ ಸಹೋದ್ಯೋಗಿಗಳು ಮಾತ್ರವೇ ಬಲ್ಲರು!

ಸ್ಟೀವ್ ಅವರು ಕೆಲಸದಲ್ಲಿ ಅಚ್ಚುಕಟ್ಟುತನ ಹಾಗೂ ಪರಿಪೂರ್ಣತೆ ಬಯಸುತ್ತಿದ್ದರಂತೆ. ತಮ್ಮ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಸಹೋದ್ಯೋಗಿಗಳು ಸ್ಪಂದಿಸದಿದ್ದರೆ ಅವರನ್ನು ಮುಖಮೂತಿ ನೋಡದೇ ತರಾಟೆಗೆ ತೆಗೆದು ಕೊಳ್ಳುತ್ತ್ದ್ದಿದರಂತೆ! ಸ್ಟೀವ್ ಜಾಬ್ಸ್ ಜೀವನಚರಿತ್ರಕಾರ ವಾಲ್ಟರ್ ಐಸಾಕ್‌ಸನ್ ಸಿಬಿಎಸ್  `60 ಮಿನಿಟ್ಸ್~ ಗೆ  ನೀಡಿದ ಸಂದರ್ಶನದಲ್ಲಿ  ಸ್ಟೀವ್ ಜಾಬ್ಸ್ ಅವರ ಇಂಥ ವಿಕ್ಷಿಪ್ತಸ್ವಭಾವಗಳನ್ನು ತೆರೆದಿಟ್ಟಿದ್ದಾರೆ.

 ವಾಲ್ಟರ್ ಬರೆದಿರುವ `ಸ್ಟೀವ್ ಜಾಬ್ಸ್~ ಜೀವನ ಚರಿತ್ರೆ ಸೋಮವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.  ಕೇವಲ ಸಹೋದ್ಯೋಗಿಗಳಿಗೆ ಮಾತ್ರವಲ್ಲ; ರೆಸ್ಟೋರೆಂಟ್‌ಗೆ ಹೋದಾಗ ಪರಿಚಾರಿಕೆಯ ಮೇಲೂ ಸ್ಟೀವ್ ರೇಗುತ್ತಿದ್ದರಂತೆ!

`ಅಚ್ಚುಕಟ್ಟುತನ ಹಾಗೂ ಪರಿಪೂರ್ಣತೆಯು ಸ್ಟೀವ್‌ಗೆ ಅವರ ಸಾಕು ತಂದೆ ಪೌಲ್ ಜಾಬ್ಸ್ ಅವರಿಂದ ಬಂದ ಬಳುವಳಿ. ಸ್ಟೀವ್ `ಕಲಹ ಪ್ರಿಯ~ ಎಂದರೆ ಉತ್ಪ್ರೇಕ್ಷೆಯಲ್ಲ~  ಎಂದು ವಾಲ್ಟರ್ ವ್ಯಾಖ್ಯಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.