ADVERTISEMENT

ಕಾಬೂಲ್: ಸೈನಿಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಕಾಬೂಲ್ (ಪಿಟಿಐ): ಆಫ್ಘನ್ ರಾಷ್ಟ್ರೀಯ ಸೇನೆಯ ಸೈನಿಕನೊಬ್ಬ ಐಎಸ್‌ಎಎಫ್ ಯೋಧನ ಮೇಲೆ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ದಾಳಿಯಲ್ಲಿ ಸತ್ತಿದ್ದಾನೆ.

ಕಂದಹಾರ್‌ದಲ್ಲಿ ಸೇನಾ ಶಿಬಿರದಲ್ಲಿ ಫೈಸಲ್ ಎಂಬ ಸೈನಿಕ ಐಎಸ್‌ಎಎಫ್ ಯೋಧನ ಮೇಲೆ ಗುಂಡು ಹಾರಿಸಿದ್ದರಿಂದ ಪ್ರತಿಯಾಗಿ ಗುಂಡಿನ ದಾಳಿ ನಡೆಸಲಾಯಿತು. ಫೈಸಲ್ ಹಾರಿಸಿದ ಗುಂಡು ಅದೃಷ್ಟವಶಾತ್ ಐಎಸ್‌ಎಎಫ್ ಯೋಧನಿಗೆ ತಗುಲಲಿಲ್ಲ. ಆತ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಫೈಸಲ್ ಸ್ಥಳದಲ್ಲಿಯೇ ಸತ್ತಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸೇನಾ ಶಿಬಿರವು ಆಫ್ಘಾನಿಸ್ತಾನ ಸೇನೆಗೆ ಸೇರಿದ್ದಾದರೂ ಅಲ್ಲಿ ವಿದೇಶಿ ಸೈನಿಕರು ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.