
ಪ್ರಜಾವಾಣಿ ವಾರ್ತೆಕಾಬೂಲ್ (ಐಎಎನ್‌ಎಸ್): ತಾಲಿಬಾನಿಗಳು ಪೊಲೀಸ್ ಠಾಣೆಯ ಮೇಲೆ ನಡೆಸಿದ ಕಾರ್ ಬಾಂಬ್ ಹಾಗೂ ಗುಂಡಿನ ದಾಳಿಯಲ್ಲಿ ಏಳು ಉಗ್ರರು ಸೇರಿ ಹದಿನೆಂಟು ಮಂದಿ ಮೃತಪಟ್ಟು, ಹದಿನಾರು ಮಂದಿ ಗಾಯಗೊಂಡಿರುವ ಘಟನೆ ಇಲ್ಲಿನ ಜಲಾಲಾಬಾದ್ ನಗರದಲ್ಲಿ ನಡೆದಿದೆ.
ದಾಳಿಯಲ್ಲಿ ಮೃತಪಟ್ಟಿರುವರ ಪೈಕಿ ಒಬ್ಬ ವಿದ್ಯಾರ್ಥಿ ಹಾಗೂ ಹತ್ತು ಪೊಲೀಸರು ಸೇರಿದ್ದಾರೆ. ಒಬ್ಬ ಪತ್ರಕರ್ತ ಹಾಗೂ ಹದಿನಾಲ್ಕು ಪೊಲೀ ಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಅಲ್ಲದೇ ಇಲ್ಲಿನ ಸರ್ಕಾರಿ ದೂರದರ್ಶನ ಕಟ್ಟಡ ಹಾಗೂ ಪೊಲೀಸ್ ಠಾಣೆಯ ಕಟ್ಟಡಕ್ಕೂ ತೀವ್ರ ಹಾನಿ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.