ADVERTISEMENT

ಕೆಲಸ ಆರಂಭಿಸಿದ ಚೀನಾದ ಚಂದ್ರನೌಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬೀಜಿಂಗ್‌ (ಪಿಟಿಐ): ಚಂದ್ರನಲ್ಲಿ ಕಳುಹಿಸಿರುವ ನೌಕೆಯ ಕಾರ್ಯವೈಖರಿಯ ನಿಗಾ ಮತ್ತು  ಸೂಕ್ತ ನಿರ್ದೇಶನ ನಿೀಡಲು ಚೀನಾ ಪ್ರಥಮ ದೂರಸಂಪರ್ಕ ಕಾರ್ಯಾ­ಚರಣೆ ಕೇಂದ್ರವನ್ನು  ಭಾನು­ವಾರ ಆರಂಭಿಸಿತು.

ಚಾಂಗ್‌–3 ನೌಕೆ ಶನಿವಾರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಬಳಿಕ ಬೀಜಿಂಗ್‌ ಬಾಹ್ಯಾಕಾಶ ನಿಯಂತ್ರಣ ಕೇಂದ್ರದಲ್ಲಿ (ಬಿಎಸಿಸಿ)  ದೂರಸಂಪರ್ಕ ಕಾರ್ಯಾಚರಣೆ ಕೇಂದ್ರ ಆರಂಭಿಸಲಾಗಿದೆ.

ಚೀನಾ ಕಳುಹಿಸಿರುವ ಆರು ಚಕ್ರದ ‘ಯುಟು’ ಅಥವಾ ‘ಜೇಡ್‌ ರ್‍ಯಾಬಿಟ್‌’ ಮೂನ್‌ ರೋವರ್‌, ಭಾನುವಾರ ಬೆಳಿಗ್ಗೆ 4.35ಕ್ಕೆ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ನಂತರ  ಅನ್ವೇಷಣಾ ಕಾರ್ಯ ಆರಂಭಿಸಿದೆ. ಈಗಾಗಲೇ ಕೆಲ ಚಿತ್ರಗಳನ್ನು ಅದು ಭೂಮಿಗೆ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT